Mohana Murali Art Gallery

" ಮೋಹನ ಮುರಳಿ ಚಿತ್ರಕಲಾ ಗ್ಯಾಲರಿ " ಪ್ರಾರಂಭದಿಂದಲು ನಮ್ಮ ಸುತ್ತ ಮುತ್ತಲಿನ ಗ್ರಾಮೀಣ ಪರಿಸರದ ಕಲಾವಿದರಿಗೆ ಅನುಕೂಲವಾಗವ ಚಿತ್ರಕಲಾ ಗ್ಯಾಲರಿ ಹೊಂದಲು ಉದ್ದೇಶಿಸಲಾಗಿತ್ತು. ಮುಖ್ಯವಾಗಿ ಪೇಟೆ, ಪಟ್ಟಣಗಳಲ್ಲಿರುವ ಗ್ಯಾಲರಿಯ ವೆಚ್ಚವನ್ನು ಭರಿಸಿ ಚಿತ್ರಕಲಾ ಪ್ರದರ್ಶನ ಮಾಡುವುದು ಸಣ್ಣ ಕಲಾವಿದರಿಗೆ ಅಥವಾ ಶಾಲಾ ವಿಧ್ಯಾರ್ಥಿಗಳಿಗೆ ಸಾಧ್ಯವೇ ಇಲ್ಲ. ಹಾಗಾಗಿ ಅಂತಹವರಿಗೆ ಒಂದು ವೇದಿಕೆ ಒದಗಿಸುವ ಸಲುವಾಗಿ 2015 ರಲ್ಲಿ ನಮ್ಮದೆ ಆದ ಕಲಾ ಗ್ಯಾಲರಿಯನ್ನು ನಿರ್ವಹಿಸಲಾಯಿತು. ಈ ಚಿತ್ರಕಲಾ ಗ್ಯಾಲರಿಯಲ್ಲಿ ಯಾವುದೇ ಚಿತ್ರ ಕಲಾವಿದರು ತಮ್ಮ ಕಲಾ ಪ್ರದರ್ಶನ ಮತ್ತು ಅದರ ಮಾರಾಟಕ್ಕೆ ಮುಕ್ತ ಅವಕಾಶ ಮತ್ತು ಆ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಕಳ್ಳಬಹುದಾಗಿದೆ. ಈಗಾಗಲೆ 5 ಚಿತ್ರಕಲಾ ಪ್ರದರ್ಶನ ಸಕಾರಗೊಂಡಿದೆ. ಮುಂದೆ ಆಸಕ್ತರು ಇದನ್ನು ಉಪಯೋಗಿಸಿಕೊಳ್ಳಲಿ ಅನ್ನುವುದು ನಮ್ಮ ಆಶಯ.